Description
ವಿಜ್ಞಾನದ ಎಲ್ಲಾ ಕ್ಷೇತ್ರಗಳು ಇಂದು ಅಂತ್ಯವಿಲ್ಲದೆ ಬೆಳೆಯುತ್ತಿವೆ. ವಿಸ್ಮಯಗಳನ್ನು ಸೃಷ್ಟಿಸುತ್ತಿವೆ. ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರಕೃತಿಯನ್ನು ಕೆಣಕಿ ನೋಡಿ ಹೊಸತನ್ನು ಕಾಣುವ ಪ್ರಯತ್ನಗಳು, ಸಂಶೋಧನೆಗಳು ನಿರಂತರ ನಡೆಯುತ್ತ ಬಂದಿರುವುದAತೂ ನಿಜ. ಇದು ಸಾಮಾನ್ಯ ಜನರನ್ನಷ್ಟೇ ಅಲ್ಲ. ಸ್ವತಃ ವಿಜ್ಞಾನಿಗಳನ್ನೂ ಅಚ್ಚರಿ ಪಡುವಂತೆ ಮಾಡಿದೆ. ಭೌತವಿಜ್ಞಾನ, ಖಗೋಳ ವಿಜ್ಞಾನ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಹೀಗೆ ಯಾವುದೇ ಕ್ಷೇತ್ರ ಇಂತಹ ಅಚ್ಚರಿಗಳಿಂದ ಹೊರಗುಳಿದಿಲ್ಲ. ಪ್ರಾಣಿಶಾಸ್ತ್ರದಲ್ಲಿಯಂತೂ ಇತ್ತೀಚಿನ ಸಂಶೋಧನೆಗಳು ಬೆರಗುಗೊಳಿಸುವಂತಹವಾಗಿವೆ. ನಿರಂತರವಾದ ಶೋಧನೆ-ಸಂಶೋಧನೆಗಳಿAದ ಪ್ರಕೃತಿಗೇ ಸವಾಲೊಡ್ಡುವ ಫಲಿತಗಳು ಹೊರಬೀಳುತ್ತಿವೆ. ಅದಕ್ಕೆ ಈ ಕೃತಿಯಲ್ಲಿನ ಹಲವು ಸಂಗತಿಗಳು ನಿದರ್ಶನವೆನ್ನಬಹುದು.
Reviews
There are no reviews yet.