Description
ಡಾ. ಶ್ರೀವತ್ಸ ಅವರು ವೈದ್ಯರಾಗಿದ್ದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಆಸಕ್ತಿಯನ್ನು ಬೆಳೆಸಿಕೊಂಡು ಬಂದವರು. ಸಂಶೋಧನಾಸಕ್ತಿಯನ್ನೂ ಬೆಳೆಸಿಕೊಂಡು ಬಂದವರು. ಅದರ ಫಲವೇ ‘ದಾಸ-ಶರಣ ಸಾಹಿತ್ಯದಲ್ಲಿ ವೈದ್ಯಕೀಯ ದರ್ಶನ’. ಇದೊಂದು ಉತ್ಕೃಷ್ಟ ಕೃತಿ ಎಂಬುದರಲ್ಲಿ ಅನುಮಾನವಿಲ್ಲ. ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಹಾಗೂ ಅಧ್ಯಯನಾಸಕ್ತರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವ ಈ ಕೃತಿ ಹೆಚ್ಚು ಉಪಯುಕ್ತವಾದುದಾಗಿದೆ. ಸಂಶೋಧನ ಕ್ಷೇತ್ರ ನಿರಂತರವಾದದ್ದು. ಅಗೆದಷ್ಟು, ಹೊಸ ಹೊಸ ಸಂಗತಿಗಳು ಹೊರ ಹೊಮ್ಮುತ್ತಲೇ ಇರುತ್ತವೆ. ಇಂತಹ ವಿದ್ವಾಂಸರನ್ನು ನಾನು ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ.
Reviews
There are no reviews yet.