Description
ಪುರಾತತ್ವ ಆಧಾರದ ಮೇಲೆ ಹೇಳುವುದಾದರೆ ಕರ್ನಾಟಕದಲ್ಲಿ, ಭಾರತದ ಇತರ ಭಾಗಗಳಲ್ಲಿರುವಂತೆ, ಇತಿಹಾಸ ಆರಂಭ ಕಾಲದ ಸಂಸ್ಕೃತಿಯು ಬೆಳಕಿಗೆ ಬಂದಿದೆ. ಅಂದರೆ ಇತಿಹಾಸ ಪೂರ್ವಕಾಲದ ಅನಂತರ, ಆದರೆ ಇತಿಹಾಸಕ್ಕೆ ಖಚಿತವಾಗಿ ಸೇರಬಹುದಾದ ಕಾಲಕ್ಕೆ ಮುಂಚಿನ ಈ ಸಂಸ್ಕೃತಿಯನ್ನೇ ಇತಿಹಾಸ ಆರಂಭಕಾಲದ ಸಂಸ್ಕೃತಿ ಎಂದು ಕರೆಯಬಹುದು. ಉತ್ಪನನಗಳಲ್ಲಿ ದೊರಕಿರುವ ಆಧಾರದ ಮೇಲೆ ಇದರಲ್ಲಿ ಮುಖ್ಯವಾಗಿ ಕೆಲವು ಲಕ್ಷಣಗಳು ಕಾಣಬರುತ್ತವೆ. ಅವುಗಳಲ್ಲಿ ಅತಿ ಮುಖ್ಯವಾದುದು ಆ ಕಾಲದ ಮಡಕೆ. ಸುಟ್ಟ ಕೆಂಪು ಅಥವಾ ಕಂದು ಬಣ್ಣದ ಮಡಕೆಯ ಮೇಲೆ ಬಿಳಿಯ ಬಣ್ಣದ ಗೆರೆಗಳುಳ್ಳ ಅಲಂಕಾರವೇ ಇದರಲ್ಲಿ ಅತಿ ಮುಖ್ಯವಾದುದು. ಇದರಲ್ಲಿ ವಿವಿಧ ವಿನ್ಯಾಸಗಳು ಕಂಡು ಬಂದು ವೈವಿಧ್ಯಮಯವಾದ ಅಲಂಕಾರದಿAದ ಕೂಡಿದೆ. ಇದು ಇತಿಹಾಸ ಆರಂಭ ಕಾಲದ ಸಂಸ್ಕೃತಿಯ ಎಲ್ಲ ನೆಲೆಗಳಲ್ಲಿಯೂ ಹೇರಳವಾಗಿ ದೊರಕುತ್ತದೆ. ಆದುದರಿಂದ ಇದನ್ನೇ ಅತ್ಯಂತ ಪ್ರಮುಖ ಲಕ್ಷಣವೆಂದು ಪರಿಗಣಿಸಿದರೆ ತಪ್ಪಾಗುವುದಿಲ್ಲ.
Reviews
There are no reviews yet.