Description
ಉತ್ತರ ಕರ್ನಾಟಕದ ಜನಪದ ಸಾಹಿತ್ಯಕ್ಕೆ ಹೆಚ್ಚಿನ ಒಂದು ವಿಶೇಷತೆ ಇದೆ. ಅಲ್ಲಿಯ ಭಾಷೆ ಅದಕ್ಕೆ ಮುಖ್ಯ ಕಾರಣವೆನ್ನಬಹುದು. ಅಲ್ಲಿಯ ಭಾಷೆಯ ಸೊಬಗು ಹಾಗೂ ಸೊಗಡು ಎಂತಹವರ ಮನಸ್ಸನ್ನೂ ಸೂರೆಗೊಳ್ಳಬಲ್ಲದು. ಜನಪದ ಗೀತ ಪ್ರಕಾರದಲ್ಲಿ ಗಮನ ಸೆಳೆಯುವ ಗೀಗೀ ಪದಗಳು ಅದಕ್ಕೊಂದು ಸ್ಪಷ್ಟ ನಿದರ್ಶನ. ಅಂತಹ ಒಂದು ಪ್ರಕಾರದ ಸಾಹಿತ್ಯವನ್ನು ಡಾ. ಎಂ.ಜಿ. ಬಿರಾದಾರ ಮತ್ತು ಡಾ. ಬಿ.ಎಸ್. ಕೋಟ್ಯಾಳ ಅವರುಗಳು ಸಂಗ್ರಹಿಸಿ ಸಂಪಾದಿಸಿಕೊಟ್ಟಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಡಾ. ಬಿರಾದಾರ ಅವರ ಹೆಸರು ಚಿರಪರಿಚಿತವಾದದ್ದು ಸಂಶೋಧನೆ ಸಂಗ್ರಹಣೆ, ಸಂಪಾದನೆ, ವಿಮರ್ಶೆ ಇವುಗಳ ಮೂಲಕ ಗಮನ ಸೆಳೆದಿದ್ದಾರೆ. ಈ ಈರ್ವರನ್ನು ಈ ಕಾರ್ಯಕ್ಕಾಗಿ ಅಭಿನಂದಿಸುತ್ತೇನೆ.
Reviews
There are no reviews yet.