Description
ಹೊರನಾಡಿನಲ್ಲಿ ಕನ್ನಡದ ಕೆಲಸ ಮಾಡಿದ ಗಣ್ಯರಲ್ಲಿ ಪ್ರಾಧ್ಯಾಪಕ ಪ್ರೊ. ಎಂ. ಮರಿಯಪ್ಪ ಭಟ್ಟರು ಒಬ್ಬರು. ನವೋದಯ ಕಾಲಘಟ್ಟದಲ್ಲಿ ಸಾಹಿತ್ಯದ ವಲಯವನ್ನು ಪ್ರವೇಶಿಸಿದ ಅವರು ವಿದ್ವತ್ತಿನ ಕ್ಷೇತ್ರವನ್ನು ಆರಿಸಿಕೊಂಡರು. ಇಲ್ಲಿಂದ ಮುಂದೆ ಅವರು ತಮ್ಮನ್ನು ಕನ್ನಡದ ಕಾಯಕದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಮದ್ರಾಸಿನ ತಮಿಳು ಪರಿಸರದಲ್ಲಿ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸಿದರು. ಕನ್ನಡದ ಏಳಿಗೆಗೆ ನಿರಂತರವಾಗಿ ಶ್ರಮಿಸಿದ ಚಿರಸ್ಮರಣೀಯರು. ಗ್ರಂಥ ಸಂಪಾದನೆ. ವಿಮರ್ಶೆ, ಸಾಹಿತ್ಯ ಚರಿತ್ರೆ, ಭಾಷಾವಿಜ್ಞಾನ, ಅನುವಾದ, ನಿಘಂಟು ಕ್ಷೇತ್ರದಲ್ಲಿ ವಿಶೇಷವಾಗಿ ದುಡಿದ ಪ್ರೊ. ಎಂ. ಮರಿಯಪ್ಪ ಭಟ್ಟರು ತಮ್ಮ ಕೆಲಸದ ಮೂಲಕವೇ ಸಾಹಿತ್ಯದ ವಲಯದಲ್ಲಿ ಗೌರವವನ್ನು ಪಡೆದರು.
Reviews
There are no reviews yet.