Description
ಜಾನಪದ ಅಧ್ಯಯನ ಇಂದು ತಲಸ್ಪರ್ಶಿಯಾಗಿ ನಡೆಯುತ್ತಿದೆ. ಹಲವು ಒಳ ನೋಟಗಳ-ಸುಳಿಯಲ್ಲಿ ಹೆಕ್ಕಿ ತೆಗೆಯುವ ಪ್ರಯತ್ನ ನಿರಾತಂಕವಾಗಿ ಸಾಗಿದೆ. ಒಂದು ಕಾಲಕ್ಕೆ ಕೇವಲ ಕತೆ-ಗೀತೆಗಳ ವರ್ಣನೆ-ವಿಶ್ಲೇಷಣೆಗೆ ಸೀಮಿತವಾಗಿದ್ದ ಅಧ್ಯಯನ ಒಂದು ತ್ರಿವಿಕ್ರಮ ಸ್ವರೂಪಿಯಾಗಿ ಎಲ್ಲ ಮಗ್ಗುಲುಗಳನ್ನೂ ಶೋಧಿಸುವ ಕಾರ್ಯದಲ್ಲಿ ಯಶಸ್ಸು ಕಂಡಿದೆ. ‘ಬಿತ್ತನೆ-ಹರ್ತನೆ’ ಅಂತಹ ಪ್ರಾಮಾಣಿಕ ಪ್ರಯತ್ನಗಳಲ್ಲಿ ಒಂದು. ತುಂಬ ಅರ್ಥಗರ್ಭಿತವಾದ ಶೀರ್ಷಿಕೆಯ ಈ ಕೃತಿ ಜಾನಪದದ ವಿವಿಧ ವಿಷಯಗಳನ್ನು ಅರ್ಥೈಸುವಲ್ಲಿ ಹಾಗೂ ಅದನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿದೆ.
Reviews
There are no reviews yet.