Description
ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ತಂದುಕೊಟ್ಟ ಹಾಗೂ ಇಪ್ಪತ್ತನೆಯ ಶತಮಾನದಲ್ಲಿ ಕನ್ನಡಕ್ಕೆ ಮೊದಲ ಮಹಾಕಾವ್ಯವನ್ನು ಕೊಟ್ಟ ರಾಷ್ಟ್ರಕವಿ ಕುವೆಂಪು ಅವರು ಹಲವು ಪ್ರಥಮಗಳ ಸಾಧಕರು. ಕನ್ನಡದ ಶಕ್ತಿಯನ್ನು ಹೆಚ್ಚಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಅವರ ಸಾಹಿತ್ಯವನ್ನು ಕುರಿತು ಬಂದಿರುವ ವಿಮರ್ಶೆ ಹಾಗೂ ಸಮೀಕ್ಷೆಗಳು ಅಪಾರ. ಕನ್ನಡದ ಮತ್ತೊಂದು ಶಕ್ತಿಯೆನಿಸಿದ ಪ್ರೊ. ದೇಜಗೌ ಅವರು ಕುವೆಂಪು ಅವರ ಬಗ್ಗೆ ತಂದಿರುವ ವಿಮರ್ಶೆಯ ಸಂಪುಟಗಳ ದಾಖಲೆ ನಿರ್ಮಿಸುವಂತಹುಗಳಾಗಿವೆ. ಕನ್ನಡದ ಪರ ಹುಟ್ಟುಹೋರಾಟಗಾರರಾಗಿರುವ ಪ್ರೊ. ದೇಜಗೌ ಕುವೆಂಪು ಅವರ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಿದವರು. ಪ್ರಸ್ತುತ ಕೃತಿ ‘ಮಹಾಕವಿ ಕುವೆಂಪು ದರ್ಶನ’ ಅವುಗಳಲ್ಲಿ ಒಂದು. ನಮ್ಮ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಮೂಲಕ ಇದನ್ನು ಪ್ರಕಟಿಸಲು ಅವಕಾಶಮಾಡಿಕೊಟ್ಟ ಅವರಿಗೆ ಕೃತಜ್ಞತಾಪೂರ್ವ ಅಭಿನಂದನೆಗಳು.
Reviews
There are no reviews yet.