Description
ಮಹಿಳಾ ಅಧ್ಯಯನ ಇತ್ತಿಚಿನ ದಿನಗಳಲ್ಲಿ ಆಸಕ್ತಿಯ ಅಧ್ಯಯನ ವಿಷಯವಾಗಿದೆ. ಅಗತ್ಯವಾದ ಹಾಗೂ ಮಹತ್ವದ ವಿಷಯವೂ ಆಗಿದೆ. ಮಹಿಳಾ ಸಮಸ್ಯೆಗಳನ್ನು ಕುರಿತ ಆಲೋಚನೆಗಳು, ಚಿಂತನೆಗಳು ಸಮಸ್ಯೆಗಳಿಗೆ ಪರಿಹಾರ ಸೂಚಿಸುವಲ್ಲಿ ಸಹಾಯಕವಾಗುತ್ತವೆ ಎಂಬುದರಲ್ಲಿ ಅನುಮಾನವಿಲ್ಲ. ಪ್ರೊ. ಶಾಂತಾ ಇಮ್ರಾಪೂರ ಅವರು ಪ್ರಸ್ತುತ ಕೃತಿಯಲ್ಲಿ ಅಂತಹ ಕಾಳಜಿಯನ್ನು ತೋರಿದ್ದಾರೆ. ಹಾಗಾಗಿ ಇದೊಂದು ಉತ್ಕೃಷ್ಟ ಕೃತಿ ಎಂಬುದರಲ್ಲಿ ಅನುಮಾನವಿಲ್ಲ. ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಹಾಗೂ ಅಧ್ಯಯನಾಸಕ್ತರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವ ಈ ಕೃತಿ ಹೆಚ್ಚು ಉಪಯುಕ್ತವಾದುದಾಗಿದೆ. ಸಂಶೋಧನ ಕ್ಷೇತ್ರ ನಿರಂತರವಾದದ್ದು. ಅಗೆದಷ್ಟು, ಹೊಸ ಹೊಸ ಸಂಗತಿಗಳು ಹೊರ ಹೊಮ್ಮುತ್ತಲೇ ಇರುತ್ತವೆ.
Reviews
There are no reviews yet.