Description
ಪ್ರಸಾರಾAಗದಿAದ ಹೊರತರುತ್ತಿರುವ ‘ಮುಕ್ತ ಅಧ್ಯಯನ’ಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಚೌಕಟ್ಟೂ ಇದೆ. ದಿನೇ ದಿನೇ ಹೆಚ್ಚುತ್ತಿರುವ ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯನ್ನು ಹಾಗೂ ಅವರ ಆಸಕ್ತಿಯನ್ನೂ ಗಮನಿಸಿದಾಗ ಆಶ್ಚರ್ಯ ಹುಟ್ಟದೆ ಇರದು. ಎಲ್ಲ ಭಾಗದ, ಎಲ್ಲ ಭಾಷೆಯ ಎಲ್ಲಾ ವಯೋಧರ್ಮದ ವಿದ್ಯಾಕಾಂಕ್ಷಿಗಳು ಜಾತಿಮತ ಲಿಂಗಭೇದವಿಲ್ಲದೆ ಇಲ್ಲಿ ಸಾಲುಗಟ್ಟಿ ನಿಲ್ಲುವುದನ್ನು ಈಕ್ಷಿಸಿದಾಗ ಮುಕ್ತ ವಿಶ್ವವಿದ್ಯಾನಿಲಯದ ಸೇವೆ ಸಾರ್ಥಕವೆನಿಸುತ್ತದೆ. ಅಂತಹ ಜ್ಞಾನದಾಹಿಗಳಿಗೆ ಮುಕ್ತವಾದ ಜ್ಞಾನಾರ್ಜನೆಯ ವಾತಾವರಣವನ್ನು ಕಲ್ಪಿಸುವ ಜವಾಬ್ದಾರಿಯನ್ನು ನಮ್ಮಲ್ಲಿ ಎಚ್ಚರಿಸುತ್ತದೆ ಮಾತ್ರವಲ್ಲ ಹೆಚ್ಚಿಸುತ್ತದೆ
Reviews
There are no reviews yet.