Description
ಭೂದೇವಿಗೂ ಭಾರತೀದೇವಿಗೂ ಇನ್ನೂ ಸಾಕಷ್ಟು ಬಾಂಧವ್ಯ ಬೆಳೆದಿಲ್ಲ. ಭಾರತವು ಇನ್ನೂ ವಿಶ್ವದ ಸಜೀವ ಭಾಗವಾಗಿಲ್ಲ. ಕರ್ನಾಟಕ ದೇವಿಯದು ಹಾಗಲ್ಲ. ಅವರಿಬ್ಬರಲ್ಲಿ ಬಾಂಧವ್ಯ ಅತಿ ಪುರಾತನ ಕಾಲದಿಂದಲೂ ಬೆಳೆದುಬಂದಿದೆ ಭಾರತೀಯ ಸಂಸ್ಕೃತಿಯೂ ಕರ್ನಾಟಕ ಸಂಸ್ಕೃತಿ, ಅಲ್ಲದೆ ಕರ್ನಾಟಕ ಸಂಸ್ಕೃತಿ ಭಾರತೀಯ ಸಂಸ್ಕೃತಿಯನ್ನು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಬೆಳೆಸಿ ಪೋಷಿಸುತ್ತ ಬಂದಿದೆ. ಅದೇ ಕರ್ನಾಟಕದ ವಿಶಿಷ್ಟ ಸಂಸ್ಕೃತಿ, ‘ಅತ್ಯತಿಷ್ಠದ್ದಶಾಂಗುಲA’ ಎಂಬAತೆ ಮೀರಿ ನಿಂತಿದೆ. ಕರ್ನಾಟಕವು ಧರ್ಮ ಇತಿಹಾಸ, ಭಾಷೆ, ಕಲೆ, ಆಚಾರ, ವಿಚಾರ, ಪರಂಪರೆ ಮುಂತಾದವುಗಳಿಗೆ ವಿಶಿಷ್ಟ ಸಂಸ್ಕಾರಗಳನ್ನು ಕೊಟ್ಟು ತನ್ನದೇ ಆದ ಒಂದು ಬಣ್ಣದಿಂದ ಮೆರುಗು ಕೊಟ್ಟಿದೆ. ಆ ವಿಶಿಷ್ಟ ಸಂಸ್ಕೃತಿಯೇ ‘ಕರ್ನಾಟಕ’ ಸಂಸ್ಕೃತಿಯಲ್ಲಿ ಭಾರತ ಸಂಸ್ಕೃತಿ ಅಂತರ್ಯಾಮಿಯಾಗಿದೆ.
Reviews
There are no reviews yet.