Description
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಸಾರಾಂಗ ಮೈಸೂರು ದರ್ಶನದ ಮೊದಲ ಕಂತಾಗಿ ಎರಡು ಬೃಹದ್ ಸಂಪುಟಗಳನ್ನು ಹೊರತರುತ್ತಿರುವುದು ಸಂತೋಷದ ಹಾಗೂ ಹೆಮ್ಮೆಯ ವಿಷಯ. ಮೈಸೂರು ಪಾರಂಪರಿಕವಾದ ಇತಿಹಾಸ ಪ್ರಸಿದ್ಧ ಸಾಂಸ್ಕೃತಿಕ ನಗರಿ. ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಮೊದಲಾದವುಗಳಿಗೆ ಹೆಸರಾದದ್ದು. ಮೈಸೂರು ದಸರಾ ದೇಶ-ವಿದೇಶೀಯರ ಮನ ಗೆದ್ದಿದೆ. ಇಲ್ಲಿನ ಭವ್ಯ ಕಟ್ಟಡಗಳು ಕಲಾತ್ಮಕತೆಯಿಂದ ಕಣ್ಮನ ಸೂರೆಗೊಳ್ಳುತ್ತವೆ. ಇಲ್ಲಿಯ ಪ್ರಾಣಿ ಸಂಗ್ರಹಾಲಯ ಮತ್ತೊಂದು ವಿಶೇಷ. ಹೀಗೆ ಇದರ ಖ್ಯಾತಿ ಅಪಾರ, ಅಪೂರ್ವ, ಮೈಸೂರು ದರ್ಶನ ಇವೆಲ್ಲವನ್ನೂ ಗರ್ಭೀಕರಿಸಿಕೊಂಡು ಹೊರಹೊಮ್ಮಿದೆಯೆಂದು ಭಾವಿಸುತ್ತೇನೆ. ಈ ಕಾರ್ಯದಲ್ಲಿ ಭಾಗಿಯಾದ ಎಲ್ಲರಿಗೂ ಶುಭ ಹಾರೈಸಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
Reviews
There are no reviews yet.