Description
ಪ್ರೊ. ಬಿ.ಕೆ. ಶಿವಣ್ಣ ಅವರು ಮೈಸೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯಗಳ ವಿವಿಧ ಹುದ್ದೆಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದವರು. ರಾಷ್ಟಿçÃಯ ಸೇವಾ ಯೋಜನೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು ಅದಕ್ಕೊಂದು ಹೊಸ ರೂಪವನ್ನು ಕೊಡುವಲ್ಲಿ ಅವರು ನಿರಂತರ ಶ್ರಮಿಸುತ್ತ ಬಂದಿದ್ದಾರೆ. ಪ್ರಸ್ತುತ ಈ ಸಂಪಾದಿತ ಕೃತಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಹಾಗೂ ಅದರ ವಿವಿಧ ಕಾರ್ಯಗಳ ಸಂಕ್ಷಿಪ್ತ ಪರಿಚಯವನ್ನು ಆ ಕ್ಷೇತ್ರದಲ್ಲಿ ನುರಿತವರಿಂದ ಬರೆಸಿ ಸಂಚಯಿಸಿ ಕೊಟ್ಟಿದ್ದಾರೆ. ಇದೊಂದು ಉಪಯುಕ್ತ ಕೃತಿ ಎಂಬುದರಲ್ಲಿ ಅನುಮಾನವಿಲ್ಲ.
Reviews
There are no reviews yet.