Description
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಶಿಕ್ಷಣಶಾಸ್ತ್ರ ವಿಭಾಗವು ಶಿಕ್ಷಣಶಾಸ್ತ್ರ ವಿಷಯ ವಿಶ್ವಕೋಶವನ್ನು ರೂಪಿಸುವ ಬೃಹತ್ ಕಾರ್ಯ ಕೈಗೊಂಡಿದ್ದು, ಇದನ್ನು ಎರಡು ಸಂಪುಟಗಳಲ್ಲಿ ಹೊರತರಲು ಕಾರ್ಯೋನ್ಮುಖರಾಗಿದ್ದು, ಸುಮಾರು ಒಂದು ವರ್ಷ ಕಾಲದ ಪರಿಶ್ರಮದ ಫಲವಾಗಿ ಮೊದಲ ಸಂಪುಟವನ್ನು ೨೦೧೨ನೇ ಮೇ/ಜೂನ್ ಮಾಹೆಯಲ್ಲಿ ಪ್ರಕಟಿಸಲು ನಿರ್ಧರಿಸಿರುವುದು ಸಂತೋಷದ ವಿಷಯವಾಗಿದೆ. ಪ್ರಸ್ತುತ ೧೨೦೦ಕ್ಕಿಂತ ಅಧಿಕ ಪುಟಗಳ ಈ ಪ್ರಥಮ ಸಂಪುಟದಲ್ಲಿ ೩೬೨ ಲೇಖನಗಳಿದ್ದು, ಇವು ಶಿಕ್ಷಣ ಶಾಸ್ತ್ರ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪ್ರಶಿಕ್ಷಕರಿಗೆ, ಆಡಳಿತಗಾರರಿಗೆ, ಸಂಶೋಧಕರಿಗೆ ಹಾಗೂ ಶಿಕ್ಷಣ ಶಾಸ್ತ್ರದಲ್ಲಿ ಆಸಕ್ತಿ ಇರುವ ಎಲ್ಲ ಜನ ಸಾಮಾನ್ಯರಿಗೆ ಆಕರ ಗ್ರಂಥವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಕನ್ನಡ ಸಾರಸ್ವತ ಲೋಕಕ್ಕೆ ವಿಶೇಷವಾಗಿ ಶಿಕ್ಷಣಕ್ಷೇತ್ರಕ್ಕೆ ಇದು ಒಂದು ಅಪೂರ್ವ ಕೊಡುಗೆ ಎಂದು ನನ್ನ ಅನಿಸಿಕೆ. ಈ ಮೂಲಕ ಈ ವಿಶ್ವವಿದ್ಯಾನಿಲಯವು ಕನ್ನಡ ಭಾಷಾ ಅಭಿವೃದ್ಧಿಗೆ ತನ್ನದೇ ಆದ ವಿಶಿಷ್ಟ ಕಾಣಿಕೆಯನ್ನು ನೀಡಿದೆ ಎಂದರೆ ತಪ್ಪಾಗಲಾರದು. ಈ ಸಂದರ್ಭದಲ್ಲಿ ಹೊರತರಲಿರುವ ವಿಶ್ವಕೋಶವು ಸುಂದರವಾಗಿ ಮೂಡಿಬರಲೆಂದು ಶುಭವನ್ನು ಹಾರೈಸುತ್ತೇನೆ.
Reviews
There are no reviews yet.