Description
ಕೌಶಿಕ ಸಾಧನೆ ಮತ್ತು ಬೋಧನೆ ಒಂದು ವಿಶಿಷ್ಟ ಕೃತಿ. ಆಧ್ಯಾತ್ಮಿಕ ಲೋಕದ ಅನಾವರಣವನ್ನು ಲೇಖಕರು ಇಲ್ಲಿ ಮಾಡಿಕೊಟ್ಟಿದ್ದಾರೆ. ಸಾಧನೆ ಮತ್ತು ಬೋಧನೆಗಳ ಅಪೂರ್ವ ಸಂಗಮವನ್ನು ಇಲ್ಲಿ ಕಾಣಬಹುದಾಗಿದೆ. ಶ್ರೀ ಸುರೇಶ್ ಕುಮಾರ್ ಅವರು ಒಳ್ಳೆಯ ಬೋಧಕರಾಗಿದ್ದು, ಒಳ್ಳೆಯ ಲೇಖಕರು ಎಂಬುದನ್ನು ಈ ಕೃತಿಯ ಮೂಲಕ ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಇದೊಂದು ಉತ್ಕೃಷ್ಟ ಕೃತಿ ಎಂಬುದರಲ್ಲಿ ಅನುಮಾನವಿಲ್ಲ. ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಹಾಗೂ ಅಧ್ಯಯನಾಸಕ್ತರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವ ಈ ಕೃತಿ ಹೆಚ್ಚು ಉಪಯುಕ್ತವಾದುದಾಗಿದೆ. ಸಂಶೋಧನ ಕ್ಷೇತ್ರ ನಿರಂತರವಾದದ್ದು. ಅಗೆದಷ್ಟು, ಹೊಸ ಹೊಸ ಸಂಗತಿಗಳು ಹೊರ ಹೊಮ್ಮುತ್ತಲೇ ಇರುತ್ತವೆ. ಇಂತಹ ವಿದ್ವಾಂಸರನ್ನು ನಾನು ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ.
Reviews
There are no reviews yet.